

5th April 2026

ಗದಗ, ೪. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿವರ್ಷ ಪತ್ರಕರ್ತರ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತ, ಅವರನ್ನು ಪ್ರೋತ್ಸಾಹಿಸುತ್ತಿದೆ. ಅದೇ ರೀತಿ ೨೦೨೪ ಸಾಲಿನ ತನಿಖಾ ವರದಿಗೆ ಜಿಲ್ಲೆಯ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರರಾದ ಶಿವಾನಂದ ಹಿರೇಮಠ ಅವರಿಗೆ ಟಿ.ಕೆ.ಮಲಗೊಂಡ ತನಿಖಾ ವರದಿ ನೀಡಿ ರಾಜ್ಯ ಘಟಕ ಗೌರವಿಸಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ ಹೇಳಿದರು.
೨೦೨೪ ನೇ ಸಾಲಿನ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಟಿ.ಕೆ. ಮಲಗೊಂಡ ತನಿಖಾ ವರದಿ ಪ್ರಶಸ್ತಿ ಪುರಸ್ಕöÈತ ಜಿಲ್ಲಾ ವಿಜಯವಾಣಿ ಹಿರಿಯ ವರದಿಗಾರ ಶಿವಾನಂದ ಹಿರೇಮಠ ಅವರನ್ನು ವಿಜಯವಾಣಿ ಕಚೇರಿಯಲ್ಲಿ ಜಿಲ್ಲಾ ಘಟಕದಿಂದ ಸನ್ಮಾಸಿ ಮಾತನಾಡಿ, ಶಿವಾನಂದ ಹಿರೇಮಠ ಅವರು ತನಿಖಾ ವರದಿಗಳಿಗೆ ಹೆಸರು ವಾಸಿ. ಅವರಿಗೆ ಈ ಪ್ರಶಸ್ತಿ ಬಂದಿರುವುದು ಸಂಘಕ್ಕೆ ಮತ್ತು ಜಿಲ್ಲೆಗೆ ಹೆಮ್ಮೆ ಪಡುವ ವಿಷಯವಾಗಿದೆ. ಅವರು ಸಂಶೋಧನಾತ್ಮಕ ವರದಿಗಳನ್ನು ಹೆಚ್ಚು ಆಸಕ್ತಿವಹಿಸಿ ಬರೆಯುತ್ತಾರೆ. ಇನ್ನೂ ಹೆಚ್ವಿನ ಪ್ರಶಸ್ತಿಗಳು ಶಿವಾನಂದ ಅವರಿಗೆ ಒಲಿದು ಬರಲಿ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರು, ಕಾರ್ಯಕಾರಿಣಿ ಸದಸ್ಯ ವೆಂಕಟೇಶ ಇಮರಾಪೂರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಅರುಣ ಹಿರೇಮಠ, ಮೌನೇಶ ಬಡಿಗೇರ, ಅನೀಲ ತೆಂಬದಮನಿ, ಸುನೀಲ ತೆಂಬದಮನಿ, ರಾಮು ವಗ್ಗಿ, ಮುತ್ತು ಜಡಿ, ಮಹಾಲಿಂಗೇಶ ಹಿರೇಮಠ, ಪರಶುರಾಮ ಹಳ್ಳದ ಸೇರಿದಂತೆ ಮುಂತಾದವರು.
undefined

ದೇಶನೂರಿನ ವಿಕಾಸ ಪ್ರಾಥಮಿಕ ಮತ್ತು ಪ್ರೌಢಶಾಲೆಯಿಂದ ನೀಡಿದ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿಗೆ ಸತ್ಕಾರ

ಮಾಜಿ ಶಾಸಕನ ಪುತ್ರನ ಹತ್ಯೆಗೆ ಅನೈತಿಕ ಸಂಬಂಧ ಕಾರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ